ವಾಯುಗುಣ ಬದಲಾವಣೆ - Climate Change

ಅಂತರ್ಜಾಲ ತಾಣದ ನಿರ್ವಹಣೆ - ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ನೆರವು: ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ, ನವ ದೆಹಲಿ
[Ministry of Environment and forest, New Delhi ]

news & events

"Official KRVP, Facebook Fan Page Launched"



ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸದುದ್ದೇಶದಿಂದ ಸ್ಥಾಪನೆಗೊಂಡಿರುವ ರಾಜ್ಯಮಟ್ಟದ ಸ್ವಾಯತ್ತ ಸಂಸ್ಥೆ. 1980ರಲ್ಲಿ ಕೆಲವೇ ಕೆಲವು ವಿಜ್ಞಾನಾಸಕ್ತರ ಪ್ರಯತ್ನದ ಫಲವಾಗಿ ರೂಪುಗೊಂಡಿರುವ ವಿಜ್ಞಾನ ಪರಿಷತ್ತು ಇಂದು ಬಾಲ್ಯ, ಶೈಶವ, ಪ್ರೌಢಾವಸ್ಥೆಗಳನ್ನು ದಾಟಿ ತುಂಬು ಯೌವನದ 28 ವಸಂತಗಳನ್ನು ಪೂರೈಸಿ ಹೆಮ್ಮರವಾಗಿ ಬೆಳೆದಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವ ಶ್ರೇಷ್ಠ ಸಾಂಿಕ ಪ್ರಯತ್ನಕ್ಕಾಗಿ ಭಾರತ ಸರ್ಕಾರದಿಂದ ಸ್ಥಾಪನೆಗೊಂಡ ರಾಷ್ಟ್ರೀಯ ಪ್ರಸ್ತಿಯನ್ನು ಆರಂಭಿಕ ವರ್ಷವೇ ತನ್ನದಾಗಿಸಿಕೊಂಡ ಹೆಮ್ಮೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನದು. ಇದು ವಿಜ್ಞಾನಾಸಕ್ತರೆಲ್ಲರ ಪ್ರಾಮಾಣಿಕ ಪ್ರಯತ್ನಕ್ಕೆ ದೊರೆತ ಶ್ರೇಷ್ಠ ಪುರಸ್ಕಾರ. ವರ್ಷವಿಡೀ ನಿರಂತರವಾಗಿ ಹಲವಾರು ರಾಜ್ಯಮಟ್ಟದ, ರಾಷ್ಟ್ರಮಟ್ಟದ ವಿಜ್ಞಾನ ಕಾರ್ಯಕ್ರಮಗಳು, ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಧ್ಯೇಯೋದ್ದೇಶಗಳನ್ನು ಈಡೇರಿಸಲು ಪರಿಷತ್ತು ಶ್ರಮಿಸುತ್ತಿದೆ. 125ಕ್ಕೂ ಹೆಚ್ಚಿನ ವಿಜ್ಞಾನ ಪುಸ್ತಕಗಳ ಪ್ರಕಟಣೆ, ಕಳೆದ 25 ವರ್ಷಗಳಿಂದಲೂ ನಿರಂತರವಾಗಿ ಖಂಡಿತಗೊಳ್ಳದೇ ಪ್ರಕಟಗೊಳ್ಳುತ್ತಿರುವ ಬಾಲವಿಜ್ಞಾನ ಮಾಸಪತ್ರಿಕೆ ಪರಿಷತ್ತಿಗೆ ಹೆಮ್ಮೆಯ ಸಂಗತಿಗಳು. ಮಕ್ಕಳು, ವಿದ್ಯಾಗಳು, ಶಿಕ್ಷಕರು, ಪಾಲಕರೆಲ್ಲರಲ್ಲಿ ವಿಜ್ಞಾನ ಜಾಗೃತಿಗಾಗಿ ಸುಲಭ ವಿಜ್ಞಾನ ಕಲಿಕಾ ಕಿಟ್ಗಳು, ವೈವಿಧ್ಯಮಯ ದೃಶ್ಯ-ಶ್ರವ್ಯ ಮಾಧ್ಯಮಗಳ ವಿನ್ಯಾಸ ಮುಂತಾದವುಗಳನ್ನು ವಿಜ್ಞಾನ ಪರಿಷತ್ತು ಕೈಗೊಂಡಿದೆ.




Copyright @ KRVP                                                                                                           Designed and Mantained by: Widespread Technology

free hit counter