|
ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನವು 1986 ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ, ನವದೆಹಲಿಯಿಂದ ಪ್ರಾರಂಭಗೊಂಡಂತಹ ಕಾರ್ಯಕ್ರಮ. ಪರಿಸರ ಕುರಿತಾಗಿ ಜನಸಾಮಾನ್ಯರು, ವಿದ್ಯಾಗಳು, ಸ್ವಯಂ ಸೇವಾ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆಗಳು, ಮುಂತಾದವುಗಳಿಗೆ ಅರಿವು ಮೂಡಿಸುವ ಹಾಗೂ ಕಾರ್ಯಾಂಶ ಚಟುವಟಿಕೆಗಳನ್ನು ಕೈಗೊಂಡು ಯಶಸ್ವಿಯಾಗಿ ಕಳೆದ 23 ವರ್ಷಗಳಿಂದ ದೇಶಾದ್ಯಂತ ಆಂದೋಲನ ಮುಂದುವರಿಯುತ್ತಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕದ ಪ್ರಾದೇಶಿಕ ಸಂಪನ್ಮೂಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆಂದೋಲನದ ಅಂಗವಾಗಿ ಈ ವೆಬ್ ತಾಣವನ್ನು ಪರಿಚಯಿಸಲಾಗುತ್ತಿದೆ.
|